Google Search

Custom Search

Sunday, November 30, 2008

Avoid Cancer...



Stop smoking.. cigars..............

ಕಾಡುವ ನೆರಳು

ಕಾಡುವೆ ನೀ ನಿನ್ನ ನೆನಪಲಿ..
ಕೆಣಕುವೆ ನೀ ನಿನ್ನ ಕಣ್ಣಲಿ,,
ಕಾಣುವೆ ನೀ, ನನ್ನ ನೆರಳಲಿ,,
ಕದಡುವೆ ಮನ ಮುಂಬೆರಳಲಿ,
ಮರೆಸುವೆ ಜಗ ಮಾತಲಿ..
ಉರಿಸುವೆ ನೋವು ಕ್ಷಣದಲಿ...
ಎಲ್ಲಿ ಅವಿತಿರುವೆ ನೀ ಮರೆಯಲಿ???
ಬಾ, ಒಂದಾಗು ಗೆಳತಿ!!! ನೀ ನನ್ನಲಿ....

Sunday, November 23, 2008

ಶೂನ್ಯದ ಸಂತೆ...

ಕಣ್ಣಿಗೆ ಕಾಣದೆ ಎಲ್ಲಿ ಮರೆಯಾದೆ ಓ ಕಾಂತೆ???
ಪ್ರತಿ ಹಗಲೂ, ಪ್ರತಿ ಇರುಳೂ, ನಿನದೆ ಚಿಂತೆ!!!
ನೀನೊಂದು ಸುಂದರ ಸುಮಗಳ ಕಂತೆ...
ಇರುಳೆಲ್ಲ ಕಾಡುವೆ ತಂಗಾಳಿಯಂತೆ
ಬೆಳಗಾದರೆ ಬರೀ ಶೂನ್ಯದ ಸಂತೆ...
ಕಗ್ಗತ್ತಲಲ್ಲಿ ಕಾಣುವೆ ಬೆಳದಿಂಗಳಂತೆ...
ನಡೆವ ಹಾದಿಗೆ ನೀ ದಾರಿದೀಪದಂತೆ..
ನೀ ಇಲ್ಲದೇ ನಾ ಇರುವುದೆಂತೇ???
ಕಣ್ಣಿಗೆ ಕಾಣದೆ ಎಲ್ಲಿ ಮರೆಯಾದೆ ಓ ಕಾಂತೆ???

Tuesday, November 11, 2008

Chutuka-6

ಕತ್ತಲ ಲೋಕದ ಪಯಣಿಗ ನಾ
ಬೆತ್ತಲ ಭವ್ಯತೆ ಮರೆಯೆನು ನಾ
ಸುತ್ತಲ ಭಯದಿ ಬೆದರಿದೆ ನಾ
ದೂರದಿ ಅಚ್ಚರಿ ಕಂಡೆನು ನಾ
ಕಾಣದ ವಸ್ತು ಹುಡುಕಿದೆ ನಾ
ಕತ್ತಲ ಲೋಕದ ಪಯಣಿಗ ನಾ
ಕಲ್ಪನೆ ಕನಸಲಿ ಮುಳುಗಿದೆನಾ???

Saturday, November 8, 2008

Chutuka-5

ಮೇಲೆ ನೋಡು ಚಂದಮಾಮ
ಗುಂಡ ಗುಂಡಗೆ ಕಾಣುವನಮ್ಮ
ದೂರದಿ ಬೆಳಗುವ ಗುಂಡುಮಾಮ
ಹತ್ತಿರ ಕಾಣುವ ಹೇಗಮ್ಮ???
ತಿಂಗಳಿಗೊಮ್ಮೆ ಆಗುವ ಡುಮ್ಮ
ಮತ್ತೊಮ್ಮೆ ಅವನು ಕಾಡುವ ಗುಮ್ಮ..
ಮೇಲೆ ನೋಡು ಚಂದಮಾಮ
ನನಗ್ಯಾವಾಗ ಸಿಗುವನಮ್ಮ...???

Chutuka-4

ಓ ನನ್ನ ಮುದ್ದಿನ ಪೆನ್ನೆ,,!!
ನೋಡ್ದೆ ಒಂದ್ ಫಿಗರ್ ನೆನ್ನೆ,
ನುಣುಪಾಗಿತ್ತು ಅವಳ ಕೆನ್ನೆ!!!
ಹೋಲುತಿತ್ತು ಮಂಡ್ಯ ಬೆಣ್ಣೆ!!!
ಪೆನ್ನೆ??,,, ಮಾಡೆ ಒಂದು ಸನ್ನೆ,
ಜೀವನ ಆಗ್ಬಾರ್ದು ಸೊನ್ನೆ.....

Chutuka-3

ಮಚ್ಚಿ, ನೀನೇನಾ ಅವ್ಳು..?
ನನ್ ಡ್ರೀಮಲ್ ಬಂದೊಳು.
ನಿದ್ದೆಗೆ ಜಾಡ್ಸಿ ಒದ್ದೊಳು
ಬುದ್ಡಿಗೆ ಬ್ರೇಕ್ ಹಾಕ್ದೊಳು
ನೈಟ್ ನಿದ್ದೆ ಕದ್ದೊಳು
ವೈಟ್ ಡ್ರೆಸ್ಸಲ್ ಇದ್ದೊಳು
ಕಣ್ಣಲ್ ಸನ್ನೆ ಮಾಡ್ದೊಳು
ಸಣ್ ಸಣ್ಣಗೆ ನಕ್ದೊಳು
ಹಾರ್ಟ್ ಕದ್ದು ಹೊದೊಳು
ನೀನೇನಾ ಅವ್ಳು? ಮಚ್ಚಿ, ನೀನೇನಾ ಅವ್ಳು...??

Chutuka-2

ಕಂಡು ಕಾಣದೆ ಹೋದ್ಯಲ್ಲೆ
ಎಲ್ಲಿಗೆ ಹೋದ್ಯೆ ಓ ನಲ್ಲೆ
ನೀನಿರುವೆ ಸದಾ ನನ್ನಲ್ಲೆ
ನೀನೆ ನಾ, ನಾನೇ ನೀ ಓ ಸುಮಬಾಲೆ

Chutuka-1

ಕಾಣಿಸ್ತೊಂದು ಚಿಟ್ಟೆ
ಅಲ್ಲೇ ಅದನ್ನ ಮೆಟ್ಟೆ (kanglish word, meaning (met))
ಕಣ್ಣಲ್ ಕಣ್ಣು ಇಟ್ಟೆ
ಆಯ್ತು ಪ್ರೀತಿ ಮೊಟ್ಟೆ
ಕೊನೆಗಾಯ್ತು ನನ್ ಲೈಫು ಮೂರಾಬಟ್ಟೆ.... ☺☺☺