ಕಾರಿರುಳಲಿ ಕಂಡ ಬೆಂಕಿಯ ಕಿಚ್ಚಿನಂತೆ....
ಮುಸ್ಸಂಜೆಯಲಿ ಬಂದ ಮುಂಗಾರಿನ ಚಿಟಪಟ ಮಳೆಯಂತೆ....
ತಿಂಗಳ ಬೆಳದಿಂಗಳ ಬಿದಿಗೆ ಚಂದ್ರಮನಂತೆ...
ತಂಗಾಳಿಯ ಜೊತೆ ತೇಲಿ ಬರುವ ಪರಿಮಳದಂತೆ...
ಹರಿವ ನದಿಯ ಕಲಕಲ ಕಲರವದಂತೆ...
ಗುಡುಗುಡು ಗುಡುಗಿನ ಸೆಳೆವ ಆರ್ಭಟದಂತೆ...
ಸಿಡಿವ ಮಿಂಚಿನ ಅಂಚು ಹೊಳೆಯುವಂತೆ....
ಸುಡುವ ಸೂರ್ಯನ ಕಾಂತಿಯ ಕಿರಣಗಳಂತೆ...
ಚಿನ್ನದ ಮಣ್ಣಿನ ಹಸಿರ ರಾಶಿಯಂತೆ..
ನಗುವ ಮಗುವ ಕಿಲಕಿಲ ನಗೆಯಂತೆ...
ಹಾರುವ ಹಕ್ಕಿಯ ಚಿಲಿಪಿಲಿ ದನಿಯಂತೆ....
ಬಾ ಗೆಳತಿ, ನಿನಗಾಗಿ ಕಾದಿರುವ ಜೀವ ನಂದಂತೆ!!!!!
ಈ ಜೀವದಲಿ ನಿನ್ ಜೀವವ ಬೆರೆಸು,
ಮಧುವಿನ ಜೊತೆ ಮಕರಂದದಂತೆ......
No comments:
Post a Comment