ನೆನೆಯಬೇಕೆನಿಸಿದೆ ಮನದಾಳದ ಕಣ್ಣೀರ ಮಳೆಯಲ್ಲಿ,
ಗುಡುಗು-ಸಿಡಿಳುಗಳೇ ತುಂಬಿವೆ ಎಲ್ಲ ಮೂಲೆಗಳಲ್ಲಿ,
ಕ್ಷಣದಲ್ಲೇ ಮರೆಯಾಗುವೆ ನೀನು ಆ ಮಿಂಚಲ್ಲಿ,
ಎಷ್ಟು ಗುಡುಗಿದರು ನೀರಿನ ಸುಳಿವಿಲ್ಲ ನನ್ನಲ್ಲಿ,
ಬತ್ತಿ ಬರಿದಾಗಿಸಿರುವೆ ಮುಳುಗಿಸಿ ಮರಳುಗಾಡಿನಲಿ,
ಅತ್ತು ಮರೆಯುವೆ ನಿನ್ನ, ಕರುಣಿಸೆ ಕಣ್ಣೀರನ್ನ,
ಯಾರಿಗೂ ತಿಳಿಸದಲೆ ನೆನೆಯುವೆನು ಸ್ವಾತಿ ಮಳೆಯಲ್ಲಿ,
ಅತ್ತ ನೀರಿನ ಹನಿ ಸೇರಿ ಸ್ವಾತಿ ಮಳೆ ಹನಿಗಳಲಿ,
ಮುತ್ತೊಂದ ಮಾಡಿವೆ ನಿನ್ನ ಹೆಸರಲ್ಲಿ,
ಹಾರದಲಿ ಪೋಣಿಸೆ ನಿನ್ನ ಹೆಸರಿನ ಆ ಮುತ್ತನ್ನ,
ತೆಗೆಯದಿರು ಹಾರವನು ನಿನ್ನ ಕೊರಳಿಂದ,
ಖುಷಿಯಲ್ಲಿ ಸಾಯುವೆನು ಗೆಳತಿ ನಿನ್ನ ನೆನಪಲ್ಲಿ,
ಮುತ್ತಾಗಿ ನಿನ್ನೆದೆಯ ಬಳಿಯಿರುವೆನೆಂಬ ಸತ್ಯದಿಂದ....
No comments:
Post a Comment