ಹುಸಿಮನಸು...
ಹುಸಿಮನಸಿನ ಹುಡುಗನ ಕೊಂಚ ಕೊಂಚ ಕಲ್ಪನೆಗಳು, ನೆನಪಿನ ನೀಲಾಕಾಶದಿಂದ ಹನಿ-ಹನಿಯಾಗಿ ಇಳಿದು ಪದಗಳಾಗಿ ಮೂಡಿದಾಗ....
Google Search
Custom Search
Monday, March 29, 2010
ಮೈನು ರೋಡು...
ನಾನೊಂದು ಮೈನು ರೋಡು,
ನನಗಾಗಿ ನೂರಾರು ಬೋರ್ಡು,
ಬೋರ್ಡು ಬರಿ ಎ ಸಿ ಗೂಡು,
ಕೇಳೋರಿಲ್ಲ ನನ್ನ ಪಾಡು,
ನಾನೇ ನಿಮ್ಮ ಹೊಂಡದ ರೋಡು...
Sunday, March 28, 2010
ನೋವ ನರಕ
ಮುದ್ದು ನಗೆಯ ಮೆಲ್ಲ ಚೆಲ್ಲಿ,
ಕದ್ದು ಹೋದೆ ಮನವ ಕಳ್ಳಿ,
ಅಂದದರಸಿ ಮೊಗವು ಬೆಳ್ಳಿ,
ಆದರವಳು ಹುಟ್ಟು ಸುಳ್ಳಿ,
ಕಾಣದಾದಳು, ನನ್ನ ಚಿತೆಗೆ ತಳ್ಳಿ,
ನೋವ ನರಕದೊಳಗೆ ತಳ್ಳಿ...
ಮೆಂಟಲ್ ಮನಿ...
ನನ್ನ ಗೆಳ್ತಿ ಒಂದ್ ಚೂರ್ ದದ್ದಿ,
ಅವಳ್ನ ನಾನು ತಿದ್ದಿ ತಿದ್ದಿ,
ಖಾಲಿಯಾಯ್ತು ನನ್ನ ಬುದ್ಧಿ,
ಮನಿ ಮನ್ಸು ಶುದ್ಧಿ ಶುದ್ಧಿ,
ಊರ್ನಾಗಾಯ್ತು ದೊಡ್ ಸುದ್ದಿ,
ಕೊನೀಗ್ ಮೆಂಟಲ್ ಮನೀನಾಗ್ ಬಿದ್ದಿ..
Thursday, March 25, 2010
ವೋಟು-ಏಟು...
ನಿಮ್ಮ ಒಂದೇ ಒಂದು ವೋಟು,
ಅದು ತುಂಬಾ ತುಂಬಾ ಗ್ರೇಟು,
ಬೀಳ್ತಾವ್ ಧರ್ಮದ ಏಟು,
ಕೊಡೋಕ್ ಬಂದ್ರೆ ನೋಟು...
ಹುಷಾರ್, ಇದು ನನ್ನ ವೋಟು...
Monday, March 22, 2010
ಬಿರುಗಾಳಿ...
ತುದಿಗಾಲಲಿ ನಿಂತವಗೆ ತೂರಿಬಂದ ತಂಗಾಳಿ,
ತನುವೆಲ್ಲವ ತಂಪಾಗಿಸಿದೆ ನೀ ಸಿಹಿಗಾಳಿ,
ತನುವಿನವನ ಮನ ಮಿಡಿಸಿದ ಮೆಲುಗಾಳಿ,
ಮಿಡಿವ ಮನದ ದಗೆಯೇರಿಸಿದ ಸುಡುಗಾಳಿ,
ಮನ ಮಿಡಿಸಿದ ಮನದನ್ನೆಯ, ಮನದೊಲುಮೆಗೆ
ತರದೆ, ದೂರದೂರಿಗೆ ಸರಿಸಿದೆ ನೀ ಬಿರುಗಾಳಿ....
ಬಿಳಿ ಟೋಪಿ
ತಲಿ ಮ್ಯಾಲ ಬಿಳಿ ಟೋಪಿ,
ಮೋಸ ಮಾಡೋ ಪಾಪಿ,
ಮಾತ್ಗೆ ನಿಂತ್ರ ಮೂರ್ತರೂಪಿ,
ಮನ್ಸು ಕರಾಳ ಕುರೂಪಿ....
Friday, March 19, 2010
ಕಾರು-ಬಾರು
ವಾಹ್-ವಾಹ್ ಸೂಪರ್ ಕಾರು,
ಡ್ರೈವರ್ ಹಾಕಿತ್ತು ಬೀರು,
ಮಲ್ಗಿತ್ತು ಫುಲ್ ಊರು,
ಮಿತಿ ದಾಟಿತು ಕಾರಿನ ಕಾರುಬಾರು,
ಮಿತಿಯಲ್ಲಿ ಮಲ್ಗಿದ್ದವರ ಜೀವ ಏರಿತು ಬಿದಿರ ತೇರು...
Newer Posts
Older Posts
Home
Subscribe to:
Posts (Atom)