ಭರ ಭರನೆ ಬರುತಿರುವ ಅಶ್ರುಧಾರೆಯ ಅಳಿಸಿ,
ಸುಡು ಸುಡುವ ಎದೆಯ, ಎಡವದೆಲೆ ನಡೆಸಿ,
ಓಡೋಡಿ ಬಂದೆ ಗೆಳತಿ ನಿನ್ನೊಲುಮೆಯೆಡೆಗೆ...
ಚಿಟ-ಪಟ ಜಡಿ ಮಳೆಯಲ್ಲಿ, ಪಟ-ಪಟ ನುಡಿವ ಮಾತಿನಮಲ್ಲಿ,
ಕೆಟ್ಟ ಹಠವನು ಚೆಲ್ಲಿ, ಮುಟ್ಟದೆ ಮನವನು ಗಿಲ್ಲಿ,
ಬೆಟ್ಟದೆತ್ತರದ ಆಸೆ ಚಿಗುರೊಡೆಸಿ, ತೊರೆಯದೆ ಬೆಳೆಸಿ,
ಎತ್ತೆತ್ತಲೋ ಸುತ್ತಿ ಬಂದೆ ಗೆಳತಿ ನಿನ್ನೊಲುಮೆಯೆಡೆಗೆ...
ಜಿನುಗೊ ತುಂತುರು ಮಳೆಯಲ್ಲಿ, ನೆನೆದು ನಿಂತಳು ಮನದಾಳದಲ್ಲಿ,
ತುಸು-ಪಿಸು ಕಂಡ ಮೊಗದ ಮಂದಹಾಸದಲಿ,
ಪಿಸು-ಗುಸು ನುಡಿದ ಮೃದು ಮಾತಿನ ಮೋಡಿಯಲಿ,
ಮುಳುಗಿ ಮರೆಯಾಗಿ, ಮರಳಿ ತೇಲಿ ಬಂದೆ ಗೆಳತಿ ನಿನ್ನೊಲುಮೆಯೆಡೆಗೆ...
3 comments:
ಮನಕ್ಕೆ ಮುಟ್ಟುವಂತಿದೆ, ಮುಂದುವರೆಸಿ.
Thumba Channagidhe
dhanyavadagalu Santhosh... :)
Post a Comment