ನಿರಾಭರಣ ಸುಂದರಿಯೆ,
ನಿರ್ವಸ್ತ್ರ ಧಾರಿಣಿಯೆ,
ನಿರುಪಮ ಚೆಲುವೆಯೆ,
ನಿರ್ಜೀವವಾಗುತಿಹೆ ಜೀವ ಉಳಿಸೆ...
ಅಸಮಾನ ಸುಮತಿಯೆ,
ಅನುಪಮ ವಾಚಾಳಿಯೆ,
ಅನಿಯತ ಕೌಮಾರಿಯೆ,
ಅನವರತ ನೆನೆಯುತಿಹೆ ನನ್ನ ಉಳಿಸೆ...
ಸುರಲೋಕ ಬಾಲಿಕೆಯೆ,
ಸರ್ವಗುಣ ಸಂಪನ್ನೆ,
ಸುಪ್ತಮತಿ ಶ್ರೀಮತಿಯೆ,
ಸರ್ವಸ್ವ ನೀನಾಗಿರುವೆ ಬಂದು ಉಳಿಸೆ...
4 comments:
kudos for the work u do..
thanku Jo... :D
ಗುಂಡಣ್ಣ ಅವರೇ,
ಕವನ ಬೊಂಬಾಟಾಗಿದೆ.
ಉಳಿಸು ಎಂದು ಹಲುಬುತ್ತಿರೆ,
ಯಾರೂ ಉಳಿಸಲಾರರು.
ಏಳು ಗೆಳೆಯ ಎದ್ದೇಳು,
ನಿನ್ನ ಸರ್ವಸ್ವ ನೀನೇ ಆಗಿರುವೆ,
ಎಂಬುದನ್ನು ಮನಗಾಣು.
nanni, nimma kalaji ge.. dhanyavadagalu... kalpaneyali mulugidaga.. horalokada ariviruvudilla... :D hha ha ha
Post a Comment