ಕಾಣದ ಲೋಕದಲಿ ಕಾಣದೆ ಹೋದವಳೆ,
ಕನಸ ಕಟ್ಟಿ ಕಾದಿರುವೆ ಬಾರೆ ಬಾಲೆ.
ಸಾವಿರ ಕಂಗಳಲಿ ಮಿಂಚಾಗಿ ಸುಳಿದವಳೆ,
ಎರಡೆ ಕಣ್ಣಿರುವುದು ನನಗೆ ಬಾರೆ ಬಾಲೆ.
ಕಡಲ ಆಳದಲಿ ಕುಳಿತಿರುವ ಕಮಲೆ,
ಕಡಲ ತೀರದೆ ಕಾದಿರುವೆ ಬಾರೆ ಬಾಲೆ.
ಹಸಿರ ವನರಾಶಿಯಲಿ ಉಸಿರಾಗಿ ಬೆರೆತವಳೆ,
ಉಸಿರೊಂದು ಹುಡುಕುತಿದೆ ಬಾರೆ ಬಾಲೆ.
ಹೊಂಬಣ್ಣದ ಮುಂಜಾವಲಿ ಹೊನ್ನಂತೆ ಹೊಳೆವವಳೆ,
ಪ್ರೀತಿಯ ಬೆಲೆ ತೆರುವೆ ಬಾರೆ ಬಾಲೆ.
ಕೆಂಬಣ್ಣದ ಸಂಜೆಯಲಿ ಕೆನ್ನೆ ಕೆಂಪಾದವಳೆ,
ಕೆಂಪ, ತಂಪಾಗಿಸುವೆ ಬಾರೆ ಬಾಲೆ,
ಹೃದಯಾಂತರಾಳದಲಿ ಅಡಗಿರುವ ಕೋಮಲೆ,
ಜೊತೆಯಾಗಲು ಹೊರಗೆ ಬಾರೆ ಬಾಲೆ.
ಹುಸಿಮನಸಿನ ಹುಡುಗನ ಕೊಂಚ ಕೊಂಚ ಕಲ್ಪನೆಗಳು, ನೆನಪಿನ ನೀಲಾಕಾಶದಿಂದ ಹನಿ-ಹನಿಯಾಗಿ ಇಳಿದು ಪದಗಳಾಗಿ ಮೂಡಿದಾಗ....
Google Search

Custom Search
Tuesday, December 30, 2008
Monday, December 22, 2008
ಜೀವದ ಗೆಳತಿ......
ಕಾರಿರುಳಲಿ ಕಂಡ ಬೆಂಕಿಯ ಕಿಚ್ಚಿನಂತೆ....
ಮುಸ್ಸಂಜೆಯಲಿ ಬಂದ ಮುಂಗಾರಿನ ಚಿಟಪಟ ಮಳೆಯಂತೆ....
ತಿಂಗಳ ಬೆಳದಿಂಗಳ ಬಿದಿಗೆ ಚಂದ್ರಮನಂತೆ...
ತಂಗಾಳಿಯ ಜೊತೆ ತೇಲಿ ಬರುವ ಪರಿಮಳದಂತೆ...
ಹರಿವ ನದಿಯ ಕಲಕಲ ಕಲರವದಂತೆ...
ಗುಡುಗುಡು ಗುಡುಗಿನ ಸೆಳೆವ ಆರ್ಭಟದಂತೆ...
ಸಿಡಿವ ಮಿಂಚಿನ ಅಂಚು ಹೊಳೆಯುವಂತೆ....
ಸುಡುವ ಸೂರ್ಯನ ಕಾಂತಿಯ ಕಿರಣಗಳಂತೆ...
ಚಿನ್ನದ ಮಣ್ಣಿನ ಹಸಿರ ರಾಶಿಯಂತೆ..
ನಗುವ ಮಗುವ ಕಿಲಕಿಲ ನಗೆಯಂತೆ...
ಹಾರುವ ಹಕ್ಕಿಯ ಚಿಲಿಪಿಲಿ ದನಿಯಂತೆ....
ಬಾ ಗೆಳತಿ, ನಿನಗಾಗಿ ಕಾದಿರುವ ಜೀವ ನಂದಂತೆ!!!!!
ಈ ಜೀವದಲಿ ನಿನ್ ಜೀವವ ಬೆರೆಸು,
ಮಧುವಿನ ಜೊತೆ ಮಕರಂದದಂತೆ......
ಮುಸ್ಸಂಜೆಯಲಿ ಬಂದ ಮುಂಗಾರಿನ ಚಿಟಪಟ ಮಳೆಯಂತೆ....
ತಿಂಗಳ ಬೆಳದಿಂಗಳ ಬಿದಿಗೆ ಚಂದ್ರಮನಂತೆ...
ತಂಗಾಳಿಯ ಜೊತೆ ತೇಲಿ ಬರುವ ಪರಿಮಳದಂತೆ...
ಹರಿವ ನದಿಯ ಕಲಕಲ ಕಲರವದಂತೆ...
ಗುಡುಗುಡು ಗುಡುಗಿನ ಸೆಳೆವ ಆರ್ಭಟದಂತೆ...
ಸಿಡಿವ ಮಿಂಚಿನ ಅಂಚು ಹೊಳೆಯುವಂತೆ....
ಸುಡುವ ಸೂರ್ಯನ ಕಾಂತಿಯ ಕಿರಣಗಳಂತೆ...
ಚಿನ್ನದ ಮಣ್ಣಿನ ಹಸಿರ ರಾಶಿಯಂತೆ..
ನಗುವ ಮಗುವ ಕಿಲಕಿಲ ನಗೆಯಂತೆ...
ಹಾರುವ ಹಕ್ಕಿಯ ಚಿಲಿಪಿಲಿ ದನಿಯಂತೆ....
ಬಾ ಗೆಳತಿ, ನಿನಗಾಗಿ ಕಾದಿರುವ ಜೀವ ನಂದಂತೆ!!!!!
ಈ ಜೀವದಲಿ ನಿನ್ ಜೀವವ ಬೆರೆಸು,
ಮಧುವಿನ ಜೊತೆ ಮಕರಂದದಂತೆ......
Saturday, December 13, 2008
ಕಡಲ ರಾಣಿ
ತಿರುಗಿ ತಿರುಗಿ ನಿನ ನೋಡಲಾರೆ
ಸುಳಿದು ಹೋಗೆಲೆ ಕಣ್ಮುಂದೆ
ಮರುಗಿ ಕೊರಗಿ ನಾ ಸಾಯಲಾರೆ
ಅಡಗಬೇಡೆಲೆ ಬೆನ್ಹಿಂದೆ
ಕಡಲ ಆಳವ ಕಾಣಲಾರೆ..
ಕಡಲ ರಾಣಿ ನಿನ ಅರಸಿ ಬಂದೆ
ಬೆಳದಿಂಗಳಲಿ ಬೇಯಲಾರೆ
ತಂಗಾಳಿಯ ನೀ ತಳ್ಹಿಂದೆ..
ಬೆಳಕ ಬಳ್ಳಿಯೇ ಬಿಡಲಾರೆ
ಕತ್ತಲ ಕಳೆಯಲು ಬಾ ಮುಂದೆ..
ಇನ್ನೂ ಬಹಳ ನಾ ಕಾಯಲಾರೆ
ಬಂದು ಜೊತೆಯಾಗೇ, ನಾನು ನೀನು ಒಂದೇ......
ಸುಳಿದು ಹೋಗೆಲೆ ಕಣ್ಮುಂದೆ
ಮರುಗಿ ಕೊರಗಿ ನಾ ಸಾಯಲಾರೆ
ಅಡಗಬೇಡೆಲೆ ಬೆನ್ಹಿಂದೆ
ಕಡಲ ಆಳವ ಕಾಣಲಾರೆ..
ಕಡಲ ರಾಣಿ ನಿನ ಅರಸಿ ಬಂದೆ
ಬೆಳದಿಂಗಳಲಿ ಬೇಯಲಾರೆ
ತಂಗಾಳಿಯ ನೀ ತಳ್ಹಿಂದೆ..
ಬೆಳಕ ಬಳ್ಳಿಯೇ ಬಿಡಲಾರೆ
ಕತ್ತಲ ಕಳೆಯಲು ಬಾ ಮುಂದೆ..
ಇನ್ನೂ ಬಹಳ ನಾ ಕಾಯಲಾರೆ
ಬಂದು ಜೊತೆಯಾಗೇ, ನಾನು ನೀನು ಒಂದೇ......
Monday, December 8, 2008
ಸಾವಿರದ ಸಂಪಿಗೆ
ಚಿಂತೆ ಏತಕೆ ಚೆಂದವೇ..??
ಅಂತೆ ಕಂತೆಯ ಮಾತಿಗೆ...
ಬುದ್ಧಿ ನಿನಗೆ ಮಂದವೇ???
ಸಾವು ಬಯಸಿಹೆ ಸೋಲಿಗೆ...
ಅಳುಕಬೇಡ ಅಂದವೇ....
ಸಾಟಿ ಯಾರೆ ನಿನ್ ಸೊಗಸಿಗೆ???
ನೋವಿನೊಂದಿಗೆ ಸಂಗವೇ...??
ಮರೆತು ಮಿನುಗೆ ಸಂಪಿಗೆ....
ನಾ ಇರುವೆ ನಿನ್ನೊಂದಿಗೆ.....
ಅಂತೆ ಕಂತೆಯ ಮಾತಿಗೆ...
ಬುದ್ಧಿ ನಿನಗೆ ಮಂದವೇ???
ಸಾವು ಬಯಸಿಹೆ ಸೋಲಿಗೆ...
ಅಳುಕಬೇಡ ಅಂದವೇ....
ಸಾಟಿ ಯಾರೆ ನಿನ್ ಸೊಗಸಿಗೆ???
ನೋವಿನೊಂದಿಗೆ ಸಂಗವೇ...??
ಮರೆತು ಮಿನುಗೆ ಸಂಪಿಗೆ....
ನಾ ಇರುವೆ ನಿನ್ನೊಂದಿಗೆ.....
Subscribe to:
Posts (Atom)