Google Search

Custom Search

Tuesday, November 23, 2010

ಚುಕ್ಕಿ...

ಕತ್ತಲೆ ರಾತ್ರಿಯಲಿ,
ಮೆತ್ತನೆ ಸುಳಿದಾಡಿದೆ ಗೆಳತಿ,
ಹೊತ್ತು ಮುಳುಗಿದರೂ,
ಮತ್ತೆ ಮತ್ತೇಕೆ ಮಿನುಗುವೆ ನೀ ಚುಕ್ಕಿಯಂತೆ...

ಬೆತ್ತಲೆ ಬಾನಿನಲಿ,
ಎತ್ತ ನೋಡಲೇ ಗೆಳತಿ?
ಕತ್ತು ಬಾಗದು ಕೆಳಗೆ ಹೊತ್ತು ಹತ್ತಾದರೂ,
ಮತ್ತೆ ಮತ್ತೇಕೆ ಮಿನುಗುವೆ ನೀ ಚುಕ್ಕಿಯಂತೆ...

ಕಿತ್ತಳೆ ತೋಟದಲಿ,
ಸುತ್ತ ಅಲೆದಾಡಿದೆ ಗೆಳತಿ,
ಚಿತ್ತಾರ ಬಿಡಿಸಿದ್ದೆ ನೀ ನನ್ನ ನೆತ್ತಿ ಮೇಲೆ,
ಮತ್ತೆ ಮತ್ತೇಕೆ ಮಿನುಗುವೆ ನೀ ಚುಕ್ಕಿಯಂತೆ...

3 comments:

ಗುರುಪ್ರಸಾದ್ said...

ಕಲ್ಪನೆ ಚೆನ್ನಾಗಿದೆ. ನಿಜಕ್ಕೂ ಖುಷಿಯಾಯಿತು ನಿಮ್ಮ ಕಲ್ಪನಾ ಲಹರಿ ಓದಿ.--- ಗುರು

Unknown said...

ಗುರು ರವರೆ, ತುಂಬು ಹೃದಯದ ಧನ್ಯವಾದಗಳು.... :)

Shilpa said...

Wow... very nice... 1st two stanzas are awesome......