Google Search

Custom Search

Friday, April 12, 2013

ನಿನ್ನಿನಿಯನಾಗಿ...


ಬೆಳಕಿರುವವರೆಗೂ ಜೊತೆಗಿರುವೆ ನಿನ್ನ ನೆರಳಾಗಿ,
ಕಡು ಕತ್ತಲಿನಲು ಬಳಿಯಿರುವೆ ತಂಗಾಳಿಯಾಗಿ,
ಸುಡುಬಿಸಿಲಿನಲು ಜೊತೆಗಿರುವೆ ಸುರಿವ ಬೆವರಾಗಿ,
ಕೊರೆವ ಚಳಿಯಲ್ಲಿ ಜೊತೆಗಿರುವೆ ಮೈ ಶಾಖವಾಗಿ,
ಜೊತೆಯಿರುವೆ ಗೆಳತಿ ನಿನ್ನಿನಿಯನಾಗಿ....

ನಿಂತು ಪಾದವು ಬಳಲಿದರೆ ನಾನಿರುವೆ ಪೀಠವಾಗಿ,
ದುಃಖ-ದುಗುಡಗಳಿರಲು ಮನದಲ್ಲಿ ನಾನಿರುವೆ ರಕ್ಷಕನಾಗಿ,
ದಿಕ್ಕು ತೋಚದೆ ನೀನಿರಲು ದಡ ಸೇರಿಸುವೆ ಅಂಬಿಗನಾಗಿ,
ಮುಪ್ಪು ಮೂಡಿರಲು ಕಂಗಳಲಿ ಮುನ್ನಡೆಸುವೆ ಸಾರಥಿಯಾಗಿ,
ಜೊತೆಯಿರುವೆ ಗೆಳತಿ ನಿನ್ನಿನಿಯನಾಗಿ....

ಸಾವಲ್ಲು ಜೊತೆಗಿರುವೆ ಗೆಳತಿ ತಿಳಿಯದೇತಕೆ ನಿನಗೆ..???
ಸುಟ್ಟರೆ ಸುಟ್ಟುಹೋಗುವೆ ನಿನ್ನೊಡನೆ ನಾ ಕಟ್ಟಿಗೆಯಾಗಿ,
ಹೂಳಲು ನಿನ್ನೂಡಲನ್ನು ಬಿಗಿದಪ್ಪುವೆ ಸಮಾಧಿಯ ಮಣ್ಣಾಗಿ,
ಜೊತೆಯಿರುವೆ ಗೆಳತಿ ನಿನ್ನಿನಿಯನಾಗಿ....