Google Search

Custom Search

Thursday, October 21, 2010

ನೀರಲೆ...

ನೀರಲೆಯ ಮೇಲೆ ನಡೆವ ಓ ನೀರೆ,
ನನ್ನೆಡೆಗೆ ನಡೆದು ನೀ ಬಾರೆ,
ಎಳೆಬಳ್ಳಿ ಕಟಿಯ ಓ ಚೆಲುವೆ,
ನಿನ್ನೆಡೆಗೆ ಸೆಳೆದೆ ನನ್ನೊಲವೆ,
ಸರ ಸರನೆ ಇತ್ತಕಡೆ ಜಾರಿ,
ನನ್ನೆಡೆಗೆ ಒಲಿದು ನೀ ಬಾರೆ.

ಸುರನರರ ಮರೆಸುವ ಚೆಲುವೆ,
ಸುರಪಾನದಾ ಮತ್ತನೀನಳಿಸುವೆ,
ಹುಸಿಯಾಟ ಆಡದಿರು ನೀ ಒಲವೆ,
ಬಿಸಿನೋಟ ಯಾಕೆ? ಸಾಕು ನಿನ್ ನಗುವೆ
ಸರ ಸರನೆ ಇತ್ತಕಡೆ ಜಾರಿ,
ನನ್ನೆಡೆಗೆ ಒಲಿದು ನೀ ಬಾರೆ.

7 comments:

Unknown said...

Sakkathagidey chandru.. Awesome!

ಸುನಿಲ್ ಜಯಪ್ರಕಾಶ್ said...

ಓ ಜಾಣ, ನಡೆನಡೆನಡೆದು
ಸೋತಿಹುದು ಕಾಣ ಈ ನಡು.
ಹಾಗಾಗಿ, ತರುಣ, ಓಡೋಡಿ
ನೀನೇ ಬಂದೆನ್ನ ಬರಸೆಳೆದು
ಕುಡಿನೋಟವ ಬೀರಿ ಹೂನಗೆಯ ಚೆಲ್ಲಿ
ಮಲ್ಲಿಗೆಯ ಹಾದಿಯೊಳು ನಡೆಸೆನ್ನ
ಓ ಕನ್ನಡ ಕುವರ.

ಓ ಕನ್ನೆ, ಕಲ್ಪನೆಯ ಜನ್ನೆ
ಇದೀಗ ಬಂದೆನೇ ಜೊತೆಗೂಡಿ
ಮಲ್ಲಿಗೆ ಹಾದಿಯೇ ಏಕೆ,
ಮುಳ್ಳಿನ ಹಾದಿಯೊಳೂ ಕೂಡ,
ನಿನ್ನ ಅಪ್ಪಿಹಿಡಿದು, ಬಾನಾಡಿಯಂತೆ
ಗಗನದೆ ಹಾರುತ್ತಲೇ ಕರೆದೊಯ್ಯುವೆ.

Unknown said...

Nandan - dhanyavadagalu... :) :)
Nanni Sunil - dhanyavadagalu... n nimma kavana chennagide.!!! :)

Shilpa said...

soooper gundachandru :)

ಸಂತೋಷ್ ಶಾಸ್ತ್ರಿ said...

Good One....Keep Posting :)

ಸಂತೋಷ್ ಶಾಸ್ತ್ರಿ said...

Nice One:)

Unknown said...

Shilpa n Santu... thanku thanku... :) :)