ಮತಿ ಹೀನ ನಾನಾದೆ ಒಲವೆ,
ನಿನ್ನ ಒಲವಿನ ಮಿತಿಯ ಮರೆತು,
ಇನ್ಯಾರೆ ಗತಿ ನನಗೆ ಒಲವೆ,
ನೀನಿರದ ಈ ಕ್ಷಿತಿಯ ಮಿತಿಯ ಒಳಗೆ...
ಬಿರುಗಾಳಿ ಬೀಸುತಿದೆ ಮನದೊಳಗೆ,
ತನ್ನ ತಾಳ್ಮೆಯ ಗತಿಯ ಮೀರಿ,
ತಂಗಾಳಿಯಾಗಿ ನೀನೆಂದು ಬರುವೆ
ಎನ್ನ ಒಲುಮೆಯನು ಬಯಸಿ,
ನಿನಗಾಗಿ ಕಾದಿರುವೆ ಈ ಕ್ಷಿತಿಯ ಮಿತಿಯ ಒಳಗೆ...
ಸುಡುತಿರುವ ಬೆಂಕಿಯನು ಸಹಿಸಲಾರೆನು ಒಲವೆ,
ಚ್ಯುತಿಗೊಳಿಸೆ ಬೆಂಕಿಯ ಸ್ಥಿತಿ
ಸ್ವಾತಿ ಮಳೆಯನು ಸುರಿಸಿ,
ಮತಿಯ ಗತಿ ಬದಲಿಸುವ ವಿಸ್ಮಯ ಶಕ್ತಿ,
ಸ್ತುತಿ ಮಾಡಿ ಕಾದಿರುವೆ ಈ ಕ್ಷಿತಿಯ ಮಿತಿಯ ಒಳಗೆ...
ಹುಸಿಮನಸಿನ ಹುಡುಗನ ಕೊಂಚ ಕೊಂಚ ಕಲ್ಪನೆಗಳು, ನೆನಪಿನ ನೀಲಾಕಾಶದಿಂದ ಹನಿ-ಹನಿಯಾಗಿ ಇಳಿದು ಪದಗಳಾಗಿ ಮೂಡಿದಾಗ....
Google Search
 
  
    Custom Search
  
Thursday, December 16, 2010
Wednesday, December 8, 2010
ಮುಗ್ದ ಮಂದಹಾಸ...
ಉದ್ದ ಮೊಗದ ಮುಗ್ದೆ ಯಾರೆ?
ಮುದ್ದು ಮಂದಹಾಸ ತೋರೆ,
ಮದ್ದು ಗುಂಡು ಬೇಡ ಬಾರೆ,
ಮುಗ್ದ ಮಂದಹಾಸ ಸಾಕೆ
ಮುದ್ದು ಮನಸ ಕೊಲ್ಲಲು...
ಪೆದ್ದನಾಗಿ ಬಿದ್ದೆನಲ್ಲೆ,
ಗುದ್ದಿಯಾದರೂನೂ ಕೊಲ್ಲೆ,
ಗೆದ್ದ ಮನವ ಅಳಿಸಲೊಲ್ಲೆ,
ಮುಗ್ದ ಮಂದಹಾಸ ಸಾಕೆ
ಮುದ್ದು ಮನಸ ಕೆಡಿಸಲು...
ಒದ್ದೆ ಮೈಗೆ ಚಳಿಯ ಹಾಳೆ,
ಎದ್ದು ಬಿದ್ದು ಬಂದೆ ಕೇಳೆ,
ಕದ್ದು ನೋಡೋ ಆಟ ನಿಲಿಸಿ
ಜಿದ್ದನೆಲ್ಲ ಮರೆಗೆ ಸರಿಸಿ,
ಮುಗ್ದ ಮಂದಹಾಸ ತೋರೆ
ಮುದ್ದು ಮನಸನುಳಿಸಲು....
Labels:
"short poem",
"ಮುಗ್ದ ಮಂದಹಾಸ",
cold,
gundachandru,
kavana,
save,
smile,
ಕವನ,
ಚಳಿ,
ಪ್ರೀತಿ,
ಮಂದಹಾಸ,
ಮುಗ್ದ
Subscribe to:
Comments (Atom)
 
