ಏನ ಹೇಳಲಿ ನಾನು...??
ಎನ್ನ ಒಡಲಿನ ಬೆಂಕಿ
ಸುಡುತಿದೆ ನರ-ನಾಡಿಗಳೆಲ್ಲವನು,
ತಂಗಾಳಿಯಾಗಿ ತಬ್ಬುವೆಯಾ ಒಮ್ಮೆ ನೀನು||
ಏನ ಹೇಳಲಿ ನಾನು...??
ತಣಿಸುವುದ ಮರೆತು ತಂಗಾಳಿ,
ಬಿಸಿಯುಸಿರಲಿ ಬೆರೆತು ಆಗಿದೆ ಬಿಸಿಗಾಳಿ,
ಮುಂಜಾನೆ ಮಂಜಾಗಿ ಮೈಸೇರು ಒಮ್ಮೆ ನೀನು||
ಏನ ಹೇಳಲಿ ನಾನು...??
ಮಂಜು ಮೈ ಸೇರಿದರು
ಇಳಿಯದಾಗಿದೆ ಕಾವು,
ಎನ್ನೊಡಲಲ್ಲೇ ಅಡಗಿರು ಸದಾ ನೀನು||
ಹುಸಿಮನಸಿನ ಹುಡುಗನ ಕೊಂಚ ಕೊಂಚ ಕಲ್ಪನೆಗಳು, ನೆನಪಿನ ನೀಲಾಕಾಶದಿಂದ ಹನಿ-ಹನಿಯಾಗಿ ಇಳಿದು ಪದಗಳಾಗಿ ಮೂಡಿದಾಗ....
Google Search

Custom Search
Monday, January 16, 2012
ಏನ ಹೇಳಲಿ...?
Labels:
cold,
gunda,
gundachandru,
kavana,
short poem,
ಕವನ,
ಚಳಿ,
ತಂಗಾಳಿ
Friday, January 13, 2012
ಯಾರಿಗಾಗಿ..??
ಬಾಳೆಯ ತೋಟದಲಿ ಕಂಡ
ಬಾಳೆದಿಂಡಿನ ಬಾಲೆ,
ಬೆಳ್ಳಿ ಬೆಳಕಲಿ ಹೊಳೆದು
ಬಳುಕುತಿರುವೆ ನೀ ಯಾರಿಗಾಗಿ??
ಕೊಳದ ಕಮಲದೆ ಕಣ್ಣು,
ಪಳ-ಪಳನೆ ಮಿಂಚುತಿದೆ,
ಕೊಲ್ಲುವಂತಿದೆ ಕಣ್ಣಂಚಿನ ಮಿಂಚು,
ಕಣ್ಣಂಚಿನ ಸಂಚಿನಾಟವು ಯಾರಿಗಾಗಿ??
ತೊಂಡೆ ಹಣ್ಣಿನ ತುಟಿಯ,
ತಿಂದು ರುಚಿಸುವ ಬಯಕೆ,
ನೂರೊಂದು ಮುತ್ತುಗಳ ಸಾಲಾಗಿ ಜೋಡಿಸಿಹೆ,
ಸಾಲ ಮುಂದಿರುವ ಕೆಂದುಟಿಯು ಯಾರಿಗಾಗಿ??
ಶಿಲೆಯ ಒಳಗಣ ಕಲೆಯ
ಕೆತ್ತಿ ತೋರಿಸುವಂತೆ,
ನಿನ್ನಂದ ತೋರುತಿಹ ಕಲೆಯೊಡತಿ
ಶಿಲಾಬಾಲಿಕೆಯ ಭಂಗಿ ಯಾರಿಗಾಗಿ??
ಹಸಿರ ಕಾನನದಲ್ಲಿ
ಒಂಟಿ ಮರವೊಂದಕ್ಕೆ
ಅಪ್ಪಿ ನಿಂತಿರುವ ಬಳ್ಳಿ ನೀ,
ಆ ಒಲವಿನ ಅಪ್ಪುಗೆ ಯಾರಿಗಾಗಿ??
Labels:
gunda,
gundachandru,
kavana,
love,
nagu,
smile,
ಕವನ,
ಮಂದಹಾಸ,
ಸ್ಸ್ವಾತಿಮಳೆ
Thursday, January 12, 2012
ನೋಡಬೇಕೆನಿಸಿದೆ...
ಕನಸೆಂಬ ಊರಲ್ಲಿ,
ಕನವರಿಸಿದ ಮನದಲ್ಲಿ,
ಮಿನುಗುತಿಹ ತಾರೆ ನೀನು,
ಕಣ್ಮುಂದೆ ಬಾರೆ ಗೆಳತಿ||
ಕನಸಲ್ಲೇ ನೋಡಿ ನೋಡಿ,
ಕಹಿನೆನಪು ಮೂಡಿ,
ಮನಸಿಂದು ಬಾಡಿದೆ,
ಕಣ್ಮುಂದೆ ಬಾರೆ ಗೆಳತಿ||
ಮುದ್ದು ಮಲ್ಲಿಗೆ ಹೂವೆ,
ಮನದಲ್ಲೆಲ್ಲಾ ಬರಿ ನೋವೆ,
ಮರೆತರು ಮರೆಯಲಾರೆ ನಿನ್ನ,
ಕಣ್ಮುಂದೆ ಬಾರೆ ಗೆಳತಿ||
ಮರಳುಗಾಡಲಿ ಇನ್ನು,
ಬೇಯಲಾರೆನು ನಾನು,
ನೋಡಬೇಕೆನಿಸಿದೆ ನಿನ್ನ,
ಕಣ್ಮುಂದೆ ಬಾರೆ ಗೆಳತಿ||
Subscribe to:
Posts (Atom)